ಕನ್ನಡದ ರಾಕಿಂಗ್ ಸ್ಟಾರ್ ನಟ ಯಶ್ ನಟನೆಯ ರಾಮಾಯಣ ಟ್ರೇಲರ್ ಬಿಡುಗಡೆಯಾದ ಬೆನ್ನಲ್ಲೇ ಅವರದೇ ಮತ್ತೊಂದು ಸಿನಿಮಾ ಟಾಕ್ಸಿಕ್ ಟ್ರೇಲರ್ ಅಧಿಕೃತ ಬಿಡುಗಡೆ ಬಗ್ಗೆ ಸುದ್ದಿ ಹೊರಬಿದ್ದಿದೆ. ಸ್ವತಃ ಯಶ್ ಹಾಗೂ ಚಿತ್ರತಂಡ ‘ಟಾಕ್ಸಿಕ್’ ಚಿತ್ರದ ಟ್ರೇಲರ್ ಬಿಡುಗಡೆಯನ್ನು ಕನ್ಫರ್ಮ್ ಮಾಡಿದೆ.
Rocking Star Yash Toxic Trailer Release: ಕನ್ನಡದ ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ರಾಮಾಯಣ’ ಟ್ರೇಲರ್ ಬಿಡುಗಡೆಯ ಬೆನ್ನಲ್ಲೇ ಅವರದೇ ನಟನೆಯ ‘ಟಾಕ್ಸಿಕ್’ ಟ್ರೇಲರ್ ಬಿಡುಗಡೆಯ ಸುದ್ದಿ ಅಧಿಕೃತವಾಗಿ ಹೊರಬಿದ್ದಿದೆ. ಸ್ವತಃ ಯಶ್ ಹಾಗೂ ಚಿತ್ರತಂಡದವರ ಸೋಷಿಯಲ್ ಮೀಡಿಯಾಗಳಲ್ಲಿ ಈ ಬಗ್ಗೆ ಅಧಿಕೃತ ಘೋಷಣೆ ಹೊರಬಿದ್ದಿದೆ. ಬಹುನಿರೀಕ್ಷಿತ ಟಾಕ್ಸಿಕ್ ಟ್ರೇಲರ್ ಇದೇ ತಿಂಗಳು 8ರಂದು, ಅಂದರೆ 08 ಆಗಸ್ಟ್ 2026ರಂದು ಬಿಡುಗಡೆ ಆಗಲಿದೆ. ಈ ಘೋಷಣೆ ಹೊರಬೀಳುತ್ತಿದ್ದಂತೆ, ಇಡೀ ಜಗತ್ತು ಖುಷಿಯಲ್ಲಿ ತೇಲಾಡುತ್ತಿದೆ.
ಯಶ್ ಯಶ್ ಬ್ಲಾಕ್ & ವೈಟ್ ಪೋಸ್ಟರ್ ಲುಕ್ ನೋಡಿ ಜಗತ್ತೇ ತಲ್ಲಣ!
ಟಾಕ್ಸಿಕ್ ಟ್ರೇಲರ್ ಘೋಷಣೆ ಹೊತ್ತ ಯಶ್ ಪೋಸ್ಟರ್ ಬ್ಲಾಕ್ & ವೈಟ್ನಲ್ಲಿ ರಿಲೀಸ್ ಆಗಿದೆ. ಕೈನಲ್ಲಿ ಗನ್ ಹಿಡಿದು ನಿಂತಿರೋ ಯಶ್ ನೋಡಿ ಇಡೀ ಜಗತ್ತು ‘ರಾಕಿ ಬಾಯ್ ಗತ್ತು ನೋಡಿ’ ಅಂತ ಮಾತನ್ನಾಡಿಕೊಳ್ಳುತ್ತಿದೆ. ಯಶ್ ಲುಕ್ ಹಾಗೂ ಗನ್ ಮ್ಯಾನ್ ಅಟಿಟ್ಯೂಡ್ ಅವರ ಫ್ಯಾನ್ಸ್ಗಳಿಗೆ ಸಖತ್ ಮೋಡಿ ಮಾಡಿದೆ. ಆಗಸ್ಟ್ 8ನ್ನೇ ಕಾಯುವಂತೆ ಮಾಡಿದೆ.
2026ರ ಮತ್ತೊಂದು ಬಿಗ್ ಸಿನಿಮಾಗಾಗಿ ಜಗತ್ತಿನಾದ್ಯಂತ ಸಿನಿ ಅಭಿಮಾನಿಗಳು ಕಾದು ಕುಳಿತಿದ್ದಾರೆ. ಕೆಜಿಎಫ್ ಬಳಿ ರಾಕಿಂಗ್ ಸ್ಟಾರ್ ಯಶ್ ತೆರೆ ಮೇಲೆ ನೋಡಲು ಕನ್ನಡಿಗರು ಮಾತ್ರವಲ್ಲ ದೇಶ, ಜಗತ್ತಿನ ಸಿನಿಮಾ ಅಭಿಮಾನಿಗಳು ಉತ್ಸುಕರಾಗಿದ್ದಾರೆ. ಕಳೆದ ಕೆಲ ವರ್ಷಗಳಿಂದ ಟಾಕ್ಸಿಕ್ ಸಿನಿಮಾ ನಿರ್ಮಾಣ ನಿರಂತರವಾಗಿ ನಡೆಯುತ್ತಿದೆ. ಇದೀಗ ಬಿಡುಗಡೆಗೆ ಸಜ್ಜಾಗುತ್ತಿದೆ.
8-8 ಕ್ಕೆ ಟ್ರೇಲರ್
ಆಗಸ್ಟ್ 8ಕ್ಕೆ ಟಾಕ್ಸಿಕ್ ಸಿನಿಮಾದ ಟ್ರೇಲರ್ ಬಿಡುಗಡೆಯಾಗಲಿದೆ. ಈ ಕುರಿತು ಯಶ್ ಅನೌನ್ಸ್ ಮಾಡಿದ್ದಾರೆ. 08-08-2026ಕ್ಕೆ ಟಾಕ್ಸಿಕ್ ಟ್ರೇಲರ್ ಬಿಡುಗಡೆಯಾಗುತ್ತಿದೆ. ಇದೀಗ ಕುತೂಹಲ ಹೆಚ್ಚಾಗಿದೆ. ಈಗಾಗಲೇ ಟಾಕ್ಸಿಕ್ ಟೀಸರ್ ನೋಡಿ ಭಾರಿ ಚರ್ಚೆಯಾಗಿತ್ತು. ಸದ್ಯ ಮುಂಬರುವ ಟ್ರೇಲರ್ ಹೇಗಿರಬಹುದು ಪ್ರಶ್ನೆಯ ಜೊತೆಗೆ ಸಾಕಷ್ಟು ನಿರೀಕ್ಷೆ ಮನೆಮಾಡಿದೆ.
26 ಆಗಸ್ಟ್ 2026ಕ್ಕೆ ಟಾಕ್ಸಿಕ್ ರಿಲೀಸ್
ಯಶ್ ಅಭಿನಯದ, ಗೀತು ಮೋಹನದಾಸ್ ನಿರ್ದೇಶನಕ ಟಾಕ್ಸಿಕ್ ಸಿನಿಮಾ ಆಗಸ್ಟ್ 26ಕ್ಕೆ ಬಿಡುಗಡೆಯಾಗುತ್ತಿದೆ. ವಿಶೇಷ ಅಂದರೆ ಕನ್ನಡ ಹಾಗೂ ಇಂಗ್ಲೀಷ್ ಭಾಷೆಯಲ್ಲಿ ಚಿತ್ರೀಕರಣಗೊಂಡಿರುವ ಟಾಕ್ಸಿಕ್ ಸಿನಿಮಾ ತಮಿಳು, ತೆಲುಗು, ಹಿಂದಿ, ಮಲೆಯಾಳಂ ಸೇರಿದಂತೆ ಕೆಲವು ವಿದೇಶಿ ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ.
ಯಶ್ ಪೋಸ್ಟ್ ಮಾಡಿದ ಬೆನ್ನಲ್ಲೇ ಭರ್ಜರಿ ರೆಸ್ಪಾನ್ಸ್
ನಟ ಯಶ್ ತಮ್ಮ ಬಹುನಿರೀಕ್ಷಿತ ಟಾಕ್ಸಿಕ್ ಸಿನಿಮಾ ಟ್ರೇಲರ್ ಕುರಿತು ಪೋಸ್ಟ್ ಮಾಡುತ್ತಿದ್ದಂತೆ ಅಭಿಮಾನಿಗಳು ಭರ್ಜರಿ ಪ್ರತಿಕ್ರಿಯೆ ನೀಡಿದ್ದಾರೆ. ಯಶ್ ಸಿನಿಮಾಗಾಗಿ ಕಾಯುತ್ತಿದ್ದೇವೆ ಎಂದು ಪ್ರತಿಕ್ರಿಯಿಸಿದ್ದಾರೆ. ಭಾರತ ಮಾತ್ರವಲ್ಲ, ವಿಶ್ವ ಸಿನಿಮಾಪ್ರೇಮಿಗಳಲ್ಲಿ ಮಿಂಚಿನ ಸಂಚಾರ ಶುರುವಾಗಿದೆ.
ಕನ್ನಡದ ರಾಕಿಂಗ್ ಸ್ಟಾರ್ ನಟ ಯಶ್ ನಟನೆಯ ರಾಮಾಯಣ ಟ್ರೇಲರ್ ಬಿಡುಗಡೆಯಾದ ಬೆನ್ನಲ್ಲೇ ಅವರದೇ ಮತ್ತೊಂದು ಸಿನಿಮಾ ಟಾಕ್ಸಿಕ್ ಟ್ರೇಲರ್ ಅಧಿಕೃತ ಬಿಡುಗಡೆ ಬಗ್ಗೆ ಸುದ್ದಿ ಹೊರಬಿದ್ದಿದೆ. ಸ್ವತಃ ಯಶ್ ಹಾಗೂ ಚಿತ್ರತಂಡ ‘ಟಾಕ್ಸಿಕ್’ ಚಿತ್ರದ ಟ್ರೇಲರ್ ಬಿಡುಗಡೆಯನ್ನು ಕನ್ಫರ್ಮ್ ಮಾಡಿದೆ. ಈ ತಿಂಗಳು8ರಂದು, ಅಂದರೆ 08 ಆಗಷ್ಟ್ 2026ರಂದು ಯಶ್ ನಟನೆಯ ಟಾಕ್ಸಿಕ್ ಸಿನಿಮಾದ ಟ್ರೇಲರ್ ಬಿಡುಗಡೆ ಆಗಲಿದೆ.
ಹೊಸ ಅಧ್ಯಾಯ ಬರೆಯಲಿರುವ ಯಶ್
ಹೌದು, ರಾಮಾಯಣ ಹಾಗೂ ಟಾಕ್ಸಿಕ್ ಮೂಲಕ ಕನ್ನಡದ ನಟ ಜಾಗತಿಕವಾಗಿ ಹೊಸ ಅಧ್ಯಾಯ ಬರೆಯಲಿದ್ದಾರೆ ಎಂಬ ಮಾತು ಎಲ್ಲಾ ಕಡೆ ಕೇಳಿಬರುತ್ತಿದೆ. ಹಾಲಿವುಡ್ ಸ್ಟಂಟ್ ನಿರ್ದೇಶಕ ಜೆಜೆ ಪೆರಿ ಹಾಗೂ ತಮಿಳಿನ ಅನ್ಬರಿವ್ ಟಾಕ್ಸಿಕ್ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ರಾಜೀವ್ ರವಿ ಸಿನಿಮಾಟೋಗ್ರಫಿ ಮಾಡಿದ್ದಾರೆ. ಸಂಗೀತ ನಿರ್ದೇಶಕ ರವಿ ಬಸ್ರೂರ್ ಟಾಕ್ಸಿಕ್ ಸಿನಿಮಾಗೆ ಮಾಸ್ಟರ್ ಪೀಸ್ ಮ್ಯೂಸಿಕ್ ನೀಡಿದ್ದಾರೆ. ಜೊತೆಗೆ ವಿಶಾಲ್ ಮಿಶ್ರಾ, ತನ್ಶಿಕ್ ಬಗ್ಚಿ ಹಾಡುಗಳಿಗೆ ಕೆಲಸ ಮಾಡಿದ್ದಾರೆ.
ಹೀರೋಯಿನ್ಸ್ ಧಮಾಕಾ
ಟಾಕ್ಸಿಕ್ ಸಿನಿಮಾದ ಅಟ್ರಾಕ್ಷನ್ ಪ್ರಮುಖ 5 ನಟಿಯರು. ನಯನತಾರಾ, ಕಿಯಾರ ಅಡ್ವಾಣಿ, ರುಕ್ಮಿಣಿ ವಸಂತ್, ತಾರಾ ಸುತಾರಿಯಾ, ಹುಮಾ ಖುರೇಷಿ ಸೇರಿದಂತೆ ಅತೀ ದೊಡ್ಡ ನಟಿಯರ ಬಳಗ ಈ ಚಿತ್ರದಲ್ಲಿದೆ. ಈಗಾಗಲೇ ಯಶ್-ಕಿಯಾರಾ ಅಡ್ವಾಣಿಯ ‘ತಬಾಹಿ’ ಹಾಡು ಹಾಗೂ ಯಶ್-ತಾರಾ ಸುತಾರಿಯಾ ‘ಮನಮೋಹಕ’ ಹಾಡು ಜಗತ್ತಿನಾದ್ಯಂತ ಭಾರಿ ಮೆಚ್ಚುಗೆ ಗಳಿಸಿದೆ.