ದೆಹಲಿ ವಿದ್ಯಾರ್ಥಿ ಹೋರಾಟಕ್ಕೆ ಬೆಂಬಲ, ಜಾರ್ಖಂಡ್ ಹೋರಾಟಕ್ಕೆ ಮೌನವೇಕೆ? ಕಾಂಗ್ರೆಸ್‌ನ ಡಬಲ್ ಸ್ಟ್ಯಾಂಡರ್ಡ್‌ಗೆ ಬಿಜೆಪಿ ಕಿಡಿ

Author:



ದೆಹಲಿಯಲ್ಲಿ ನಡೆದ ವಿದ್ಯಾರ್ಥಿ ಹೋರಾಟಕ್ಕೆ ತೋರಿಸಿದ ಆಸಕ್ತಿ ಜಾರ್ಖಂಡ್‌ನಲ್ಲಿ ನಡೆಯುತ್ತಿರುವ ವಿದ್ಯಾರ್ಥಿಗಳ ಹೋರಾಟಕ್ಕೆ ಏಕಿಲ್ಲ? ಕಾಂಗ್ರೆಸ್ ವಿರುದ್ಧ ಬಿಜೆಪಿ ತೀವ್ರ ವಾಗ್ದಾಳಿ ನಡೆಸಿದೆ.

ಜಾರ್ಖಂಡ್‌ನಲ್ಲಿ ಸರ್ಕಾರಿ ನೌಕರಿಗಳ ಮಾರಾಟ ವಿರೋಧಿಸಿ ನಡೆಸುತ್ತಿರುವ ವಿದ್ಯಾರ್ಥಿಗಳ ಹೋರಾಟ ಸಂಬಂಧ ಶನಿವಾರ ಮಾಧ್ಯಮಗಳೊಂದಿಗೆ ಮಾತನಾಡಿದ ತೆಲಂಗಾಣ ಬಿಜೆಪಿ ಅಧ್ಯಕ್ಷ ರಾಮಚಂದರ್ ರಾವ್, ‘ಕಾಂಗ್ರೆಸ್ ಮತ್ತು ಇಂಡಿಯಾ ಒಕ್ಕೂಟದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಡಬಲ್ ಸ್ಟ್ಯಾಂಡರ್ಡ್, ಬೂಟಾಟಿಕೆ:

ದೆಹಲಿಯಲ್ಲಿ ಕಾಕ್ರೋಚ್ ಪಾರ್ಟಿ ನಡೆಸಿದ ಹೋರಾಟಕ್ಕೆ ಎಲ್ಲಿಲ್ಲದ ಮಹತ್ವದ ಕೊಟ್ಟು, ತಾವೂ ಪ್ರತಿಭಟನೆಯಲ್ಲಿ ಭಾಗಿಯಾಗಿ ಪ್ರಧಾನಿ ನಿವಾಸಕ್ಕೆ ಮುತ್ತಿಗೆಹಾಕಲು ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್ ನಾಯಕರು ಪ್ರಧಾನಿ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದರು. ಕೇಜ್ರಿವಾಲ ಸೇರಿದಂತೆ ಎಲ್ಲ ಇಂಡಿ ಒಕ್ಕೂಟ ದೆಹಲಿ ಪ್ರತಿಭಟನೆಗೆ ಪ್ರತಿಕ್ರಿಯಿಸಿತು. ಆದರೆ ಇದೇ ಜಾರ್ಖಂಡ್‌ನಲ್ಲಿ ನಡೆಯುತ್ತಿರುವ ಹೋರಾಟಕ್ಕೆ ಕಾಂಗ್ರೆಸ್ ಆಗಲಿ ಇಂಡಿಯಾ ಒಕ್ಕೂಟದ ಇತರೆ ನಾಯಕರಾಗಲಿ ಪ್ರತಿಕ್ರಿಯಿಸಿಲ್ಲ, ಬೆಂಬಲಿಸದಿರುವುದು ಇವರ ಡಬಲ್ ಸ್ಟ್ರ್ಯಾಂಡರ್ಡ್ ನಡೆ ತೋರಿಸುತ್ತದೆ ಎಂದು ಹರಿಯಾಯ್ದರು.

ವಿದ್ಯಾರ್ಥಿಗಳನ್ನು ಕೇವಲ ರಾಜಕೀಯ ಉದ್ದೇಶಗಳ ಲಾಭಕ್ಕೆ ಬಳಸಿಕೊಳ್ಳಲು ಕಾಂಗ್ರೆಸ್, ಇಂಡಿ ಒಕ್ಕೂಟ ಯತ್ನಿಸುತ್ತಿವೆ. ಕೇರಳದಲ್ಲೂ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ ರಾಹುಲ್ ಗಾಂಧಿಗೆ ಇದೆಲ್ಲ ಕಣ್ಣಿಗೆ ಕಾಣುತ್ತಿಲ್ಲ. ವಿದ್ಯಾರ್ಥಿಗಳ ಹಕ್ಕಿನ ಮಾತನಾಡುವ ಇವರು, ಜಾರ್ಖಂಡ್ ವಿದ್ಯಾರ್ಥಿಗಳ ಬಗ್ಗೆ ಪ್ರತಿಕ್ರಿಯಿಸುವುದು, ಏಕೆಂದರೆ ಜಾರ್ಖಂಡ್ ವಿದ್ಯಾರ್ಥಿಗಳ ಹೋರಾಟದಿಂದ ಇವರ ರಾಜಕೀಯ ಬೇಳೆ ಬೇಯುವುದಿಲ್ಲ. ದೆಹಲಿಯಲ್ಲಿನ ಪರಿಸ್ಥಿತಿಯನ್ನು ತಮ್ಮ ಅನುಕೂಲಕ್ಕೆ ಬಳಸಿಕೊಳ್ಳಲು ತುದಿಗಾಲ ಮೇಲೆ ನಿಂತಿದ್ದಾರೆ. ಇದರಿಂದ ಕಾಂಗ್ರೆಸ್ ನಿಲುವು ಸ್ಪಷ್ಟವಾಗಿದೆ. ಇವರಿಗೆ ವಿದ್ಯಾರ್ಥಿಗಳ ಸಮಸ್ಯೆ, ಭವಿಷ್ಯದ ಬಗ್ಗೆ ನೈಜ ಕಾಳಜಿ ಇಲ್ಲ. ದೇಶದಲ್ಲಿ ಅರಾಜಕತೆ ಸೃಷ್ಟಿಸಿಯಾದರೂ ಅಧಿಕಾರ ಹಿಡಿಯಬೇಕು ಎಂಬುದೊಂದೇ ಉದ್ದೇಶವಾಗಿದೆಎಂದು ಕಿಡಿಕಾರಿದರು.

14ನೇ ಜಾರ್ಖಂಡ್ ಲೋಕಸೇವಾ ಆಯೋಗದ (JPSC) ಪರೀಕ್ಷೆಯ ಪ್ರಾಥಮಿಕ ಪರೀಕ್ಷೆಯನ್ನು (PT) ರದ್ದುಗೊಳಿಸಬೇಕು ಮತ್ತು TDPL ಏಜೆನ್ಸಿಗಳ ಮೂಲಕ ನಡೆಸಿದ ಪರೀಕ್ಷೆಗಳನ್ನು ಪರಿಶೀಲಿಸಬೇಕು ಎಂದು ಆಗ್ರಹಿಸಿ ಜಾರ್ಖಂಡ್‌ನಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿರುವ ಬೆನ್ನಲ್ಲೇ ರಾಮಚಂದರ್ ರಾವ್ ಈ ಹೇಳಿಕೆ ನೀಡಿದ್ದಾರೆ.

FCRA ತಿದ್ದುಪಡಿ ಮಸೂದೆಗೆ ಟೀಕೆ

ಇದೇ ವೇಳೆ, ಉದ್ದೇಶಿತ ವಿದೇಶಿ ದೇಣಿಗೆ (ನಿಯಂತ್ರಣ) ತಿದ್ದುಪಡಿ ಅಥವಾ ಎಫ್‌ಸಿಆರ್‌ಎ ಮಸೂದೆ ಬಗ್ಗೆ ಅಮೆರಿಕ ಆಕ್ಷೇಪ ವಿಚಾರ ಪ್ರಸ್ತಾಪಿಸಿ, ‘ಇದು ದೇಶದ ಸಾರ್ವಭೌಮತ್ವವನ್ನೇ ಪ್ರಶ್ನಿಸುತ್ತದೆ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

FCRA ಇದು ಭಾರತದ ಆಂತರಿಕ ವಿಚಾರ. ಇದರಲ್ಲಿ ಅಮೆರಿಕದಂತಹ ಬೇರೆ ದೇಶಗಳು ಹಸ್ತಕ್ಷೇಪ ಮಾಡುವುದು ಸರಿಯಲ್ಲ. ಇದು ಭಾರತದ ಸಾರ್ವಭೌಮತ್ವವನ್ನು ಪ್ರಶ್ನಿಸಿದಂತೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.

ಏನಿದು FCRA?

ವಿದೇಶಿ ದೇಣಿಗೆ (ನಿಯಂತ್ರಣ) ತಿದ್ದುಪಡಿ ಮಸೂದೆ 2026ರ ಪ್ರಕಾರ ಒಂದು ಸಂಸ್ಥೆಯ ಎಫ್‌ಸಿಆರ್‌ಎ ನೋಂದಣಿ ರದ್ದಾದರೆ. ಹಿಂಪಡೆದರೆ ಅಥವಾ ಅವಧಿ ಮುಗಿದರೆ, ಅಂತಹ ಬಂಡವಾಳದ ಮೂಲಕ ಪಡೆದ ವಿದೇಶಿ ದೇಣಿಗೆ ಮತ್ತು ಆಸ್ತಿಗಳ ಮೇಲ್ವಿಚಾರಣೆ ನಡೆಸಲು ‘ನಿಯೋಜಿತ ಪ್ರಾಧಿಕಾರ’ವನ್ನು ಸ್ಥಾಪಿಸಲು ಈ ಮಸೂದೆ ಪ್ರಸ್ತಾಪಿಸಿದೆ.

ಒಂದು ವೇಳೆ ಅಂತಹ ಆಸ್ತಿಗಳು ಪೂಜಾ ಸ್ಥಳವಾಗಿದ್ದರೆ, ಅದರ ಧಾರ್ಮಿಕ ಸ್ವರೂಪವನ್ನು ಹಾಗೆಯೇ ಉಳಿಸಿಕೊಳ್ಳಬೇಕು ಎಂದು ಈ ಪ್ರಾಧಿಕಾರಕ್ಕೆ ಮಸೂದೆಯು ಸ್ಪಷ್ಟವಾಗಿ ಸೂಚಿಸುತ್ತದೆ. ಇದಲ್ಲದೆ, ಶಾಸನಬದ್ಧ ಉಲ್ಲಂಘನೆಗಳಿಗೆ ವಿಧಿಸುವ ಗರಿಷ್ಠ ಶಿಕ್ಷೆಯನ್ನು ಐದು ವರ್ಷಗಳ ಜೈಲು ಶಿಕ್ಷೆಯಿಂದ ಒಂದು ವರ್ಷಕ್ಕೆ ಇಳಿಸಲು ಸಹ ಈ ಮಸೂದೆ ಪ್ರಸ್ತಾಪಿಸುತ್ತದೆ.

(ಈ ವರದಿಯ ಹೆಡ್‌ಲೈನ್ ಹೊರತುಪಡಿಸಿ, ಉಳಿದಂತೆ ಸುದ್ದಿ ಸಂಸ್ಥೆಯಿಂದ ಬಂದಂತೆ ಪ್ರಕಟಿಸಲಾಗಿದೆ. ಏಷ್ಯಾನೆಟ್ ನ್ಯೂಸೇಬಲ್ ಇಂಗ್ಲಿಷ್ ತಂಡದಿಂದ ಯಾವುದೇ ಬದಲಾವಣೆ ಮಾಡಲಾಗಿಲ್ಲ.)



Movie News