ಕೊಡಗು ಜಿಲ್ಲೆಯಾದ್ಯಂತ ಮಳೆ: ಹಾರಂಗಿಗೆ 5000 ಕ್ಯುಸೆಕ್ ನೀರು! ರಾಜ್ಯದ ಜಲಾಶಯಗಳಲ್ಲಿ ಇಂದು ಎಷ್ಟು ನೀರಿದೆ?

Author:



ಮಡಿಕೇರಿ: ಕಳೆದ ಹಲವು ದಿನಗಳಿಂದ ಸಾಧಾರಣ ಮಳೆ ಸುರಿಯುತ್ತಿದ್ದ ಕೊಡಗು ಜಿಲ್ಲೆಯಲ್ಲಿ ಗುರುವಾರ ಮಳೆ ಚುರುಕುಗೊಂಡಿದೆ. ಮಡಿಕೇರಿ, ನಾಪೋಕ್ಲು, ಸಂಪಾಜೆ, ಭಾಗಮಂಡಲ, ವಿರಾಜಪೇಟೆ ಸೇರಿ ವಿವಿಧೆಡೆ ಉತ್ತಮ ಮಳೆಯಾಗಿದೆ. ಜಿಲ್ಲೆಯಲ್ಲಿ ಭಾರಿ ಮಳೆಯಾಗುತ್ತಿರುವುದರಿಂದ ಪ್ರಮುಖ ಜಲಾಶಯ ಹಾರಂಗಿಯ ಒಳಹರಿವು ಏರಿಕೆ ಕಂಡಿದ್ದು, ಸುಮಾರು 5000 ಕ್ಯುಸೆಕ್ ನೀರು ಹರಿದು ಬರುತ್ತಿದೆ. 

ಕಬಿನಿ ಜಲಾಶಯಕ್ಕೆ 8580 ಕ್ಯುಸೆಕ್ ಒಳಹರಿವು

ಮೈಸೂರು ಜಿಲ್ಲೆ ಎಚ್‌.ಡಿ.ಕೋಟೆ ತಾಲೂಕಿನ ಕಬಿನಿ ಜಲಾಶಯಕ್ಕೆ 8580 ಕ್ಯುಸೆಕ್ ಒಳಹರಿವು ಹೆಚ್ಚಿದೆ. ಮಡಿಕೇರಿಯ ಮಂಗಳಾದೇವಿ ನಗರದ ಖಾಸಗಿ ಜಾಗದಲ್ಲಿ ಸಣ್ಣ ಪ್ರಮಾಣದಲ್ಲಿ ಭೂಕುಸಿತ ಸಂಭವಿಸಿದೆ. ಭಾರೀ ಗಾಳಿಗೆ ಜಿಲ್ಲಾಸ್ಪತ್ರೆಯ ಆವರಣದಲ್ಲಿದ್ದ ಬೈಕ್‌ಗಳ ಮೇಲೆ ಮರ ಬಿದ್ದಿದೆ. ಇನ್ನು ಪಶ್ವಿಮ ಘಟ್ಟದಲ್ಲಿ ಉತ್ತುಮ ಮಳೆಯಾಗತ್ತಿರುವ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆಯ ಮಾರ್ಕಂಡೇಯ ನದಿಯ ನೀರಿನ ಹರಿವು ಹೆಚ್ಚಳವಾಗಿದೆ. ಇದರಿಂದ ರಕ್ಕಸಕೊಪ್ಪ ಜಲಾಶಯ ಭರ್ತಿಯಾಗಿದೆ. 

ಜಲಾಶಯಗಳ ಇಂದಿನ ನೀರಿನ ಮಟ್ಟ ಎಷ್ಟು?

ಕಬಿನಿ 79% 2284 2277

ಹೇಮಾವತಿ 66% 2922 2907

ತುಂಗಭದ್ರಾ 34% 1633 1609

ಸೂಪಾ(ಮೀ.) 37% 564 536

ಕೆಆರ್‌ಎಸ್ 35% 124.80 92.14

ಘಟಪ್ರಭಾ 64% 2175 2149

ಲಿಂಗನಮಕ್ಕಿ 31% 1819.12 1775

ಭದ್ರಾ 54% 2158 2127

ಹಾರಂಗಿ 95% 2859 2857

ಆಲಮಟ್ಟಿ(ಮೀ.) 95% 519.60 517.92

ನಾರಾಯಣಪುರ(ಮೀ.) 90% 492.25 491.17

ಮಲಪ್ರಭಾ 41% 2079.50 2058.45



Movie News