
ನವದೆಹಲಿ (ಜು.31) ಮಾರುತಿ ಸುಜುಕಿ ಭಾರತದ ಕಾರು ಮಾರುಕಟ್ಟೆಯಲ್ಲಿ ಅತೀ ಹೆಚ್ಚು ಪಾಲು ಹೊಂದಿದೆ. ಮಾರುತಿ ಸುಜುಕಿಯ ಎಲ್ಲಾ ಕಾರುಗಳು ಭಾರತದಲ್ಲಿ ಯಶಸ್ವಿಯಾಗಿದೆ. ಮಾರುತಿ ಸುಜುಕಿಯ ಎಂಪಿವಿ ಕಾರಾದ ಎರ್ಟಿಗಾ ಹಾಗೂ XL6 ಉತ್ತಮ ಮಾರಾಟ ದಾಖಲೆ ಹೊಂದಿದೆ. ಇದೀಗ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸುಜುಕಿ XL7 ಫೇಸ್‌ಲಿಫ್ಟ್ ಕಾರು ಅನಾವರಣಗೊಂಡಿದೆ. ಟೋಯೋಟಾ ಇನ್ನೋವ ಕ್ರೈಸ್ಟಾ, ಇನ್ನೋವಾ ಹೈಕ್ರಾಸ್ ಕಾರುಗಳಿಗೆ ಪ್ರತಿಸ್ಪರ್ಧಿ ನೀಡುವ XL7 ಕಾರು 7 ಸೀಟರ್ ಕಾರಾಗಿದೆ.
ಸುಜುಕಿ XL7 ಕಾರು ವಿಶೇಷತೆ
ವಿಶೇಷವಾಗಿ ಸುಜುಕಿ XL7 ಕಾರಿನ ಮುಂಭಾಗ ಗ್ರಿಲ್ ವಿನ್ಯಾಸ ಬದಲಾಗಿದೆ. ಈ ಮೂಲಕ ಮತ್ತಷ್ಟು ಅಗ್ರೆಸ್ಸೀವ್ ಲುಕ್ ಹೊಂದಿದೆ. ಜೊತೆಗೆ ಗಾತ್ರದಲ್ಲಿ ದೊಡ್ಡದಾಗಿ ಕಾಣಿಸುತ್ತಿದೆ. ಶಾರ್ಪರ್ ಫ್ರಂಟ್ ಬಂಪರ್, ಕ್ರೋಮ್ ಫಿನೀಶ್ ಸೇರಿದಂತೆ ಕೆಲ ಸಣ್ಣ ಬದಲಾವಣೆಗಳೂ XL7 ಕಾರಿನ ಲುಕ್ ಹೆಚ್ಚಿಸಿದೆ. XL7 ಫೇಸ್‌ಲಿಫ್ಟ್ ಕಾರು ಸಿ ಶೇಪ್ ಫಾಗ್ ಲ್ಯಾಂಪ್, 16 ಇಂಚಿನ ಅಲಾಯ್ ವ್ಹೀಲ್, ಸ್ಲಾಪಿಂಗ್ ರೂಫ್‌ಲೈನ್, ಡ್ಯುಯೆಲ್ ಟೋನ್ ಕಲರ್ ಆಯ್ಕೆಯಲ್ಲಿ ಹೊಂದಿದೆ.
ಆ್ಯಂಡ್ರಾಯ್ಡ್ ಆಟೋ ಹಾಗೂ ಆ್ಯಪಲ್ ಕಾರ್‌ಪ್ಲೇ ಸಪೋರ್ಟ್ ಮಾಡೋ 9 ಇಂಚಿನ ಇನ್ಫೋಟೈನ್ಮೆಂಟ್ ಸಿಸ್ಟಮ್, 360 ಡಿಗ್ರಿ ಮಾನಿಟರ್, ಡಿಜಿಟಲ್ ವಿಡಿಯೋ ರೆಕಾರ್ಡರ್ ಸೇರಿದಂತೆ ಕೆಲ ಪ್ರಮುಖ ಬದಲಾವಣೆಗಳು ಇದರಲ್ಲಿದೆ. ಸದ್ಯ ಥಾಯ್ಲೆಂಡ್, ಫಿಲಿಪೈನ್ಸ್, ವಿಯೆಟ್ನಾಂನಲ್ಲಿ ಹೊಸ ಕಾರು ಲಭ್ಯವಿದೆ. ಭಾರತದಲ್ಲಿ ಈ ಕಾರು ಇದೇ ರೂಪದಲ್ಲಿ ಅಥವಾ XL6 ಕಾರಿನಲ್ಲೇ ಫೇಸ್‌ಲಿಫ್ಟ್ ರೂಪದಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ.
XL7 ಫೇಸ್‌ಲಿಫ್ಟ್ ಕಾರು 1.5 ಲೀಟರ್ ಸ್ಮಾರ್ಟ್ ಹೈಬ್ರಿಡ್ ಎಂಜಿನ್ ಹೊಂದಿದ್ದು 103 ಪಿಎಸ್ ಪವರ್ ಹಾಗೂ 139 ಎನ್ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. 5ಎಂಟಿ ಹಾಗೂ 6ಎಟಿ ಟ್ರಾನ್ಸ್‌ಮಿಶನ್ ಆಯ್ಕೆಯಲ್ಲಿ ಲಭ್ಯವಿದೆ. ಇನ್ನು ಸಿಎನ್‌ಜಿ ವೇರಿಯೆಂಟ್ 88 ಪಿಎಸ್ ಪವರ್ ಹಾಗೂ 121.5 ಎನ್ಎಂ ಟಾರ್ಕ್ ಸಾಮರ್ಥ್ಯ ಹೊಂದಿದೆ. ನೂತನ ಕಾರಿನ ಬೆಲೆ 12 ರಿಂದ 14.53 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ) ಎಂದು ಅಂದಾಜಿಸಲಾಗಿದೆ.