ಜೀರೋ TO ಹೀರೋ, ಮೈಸೂರಿನಿಂದ ಅಮೆರಿಕಾ.. ‘ಧರೆಗೆ ದೊಡ್ಡಣ್ಣ’ ಆಗಿರೋ ರಾಕಿಂಗ್ ಸ್ಟಾರ್ ಯಶ್ ಹಿಂದಿರೋ ಸೀಕ್ರೆಟ್ ಇದು!

Author:


ಕರ್ನಾಟಕದ ಹಾಸನದಲ್ಲಿ ಹುಟ್ಟಿ, ಮೈಸೂರಿನಲ್ಲಿ ಬೆಳೆದಿರುವ ಕನ್ನಡದ ಹುಡುಗ ಯಶ್ ಇಂದು ಹಾಲಿವುಡ್ ಸಿನಿಮಾ ನಟರತ ಲೆವಲ್‌ಗೆ ಬೆಳೆದುನಿಂತಿದ್ದಾರೆ. ಅವರು ಇಷ್ಟೊಂದು ಎತ್ತರಕ್ಕೆ ಬೆಳೆದು ನಿಂತಿದ್ದು ಹೇಗೆ? ಆ ಸೀಕ್ರೆಟ್ ಇಲ್ಲಿದೆ ನೋಡಿ..

ಕರ್ನಾಟಕದ ಹಾಸನದಲ್ಲಿ ಹುಟ್ಟಿ, ಮೈಸೂರಿನಲ್ಲಿ ಬೆಳೆದಿರುವ ಕನ್ನಡದ ಹುಡುಗ ಯಶ್ ನಾಟಕ ಹಾಗೂ ಸೀರಿಯಲ್ ಮೂಲಕ ತಮ್ಮ ಬಣ್ಣದ ಬದುಕು ಶುರುಮಾಡಿದ್ದಾರೆ. ಬಳಿಕ, ಸಿನಿಮಾದಲ್ಲಿ ಸಣ್ಣಪುಟ್ಟ ಪಾತ್ರ ಮಾಡಿ, ಮೊಗ್ಗಿನ ಮನಸ್ಸು ಸಿನಿಮಾದ ಪಾತ್ರದ ಮೂಲಕ ಸಿನಿಮಾರಂಗದಲ್ಲಿ ನೆಲೆ ಕಂಡುಕೊಂಡರು.

ಆ ಬಳಿಕ ಕನ್ನಡದ ಸಿನಿಮಾದಲ್ಲಿ ಹೀರೋ ಆಗಿ ನಟಿಸುತ್ತ, ಸ್ಟಾರ್ ನಟರಾಗಿ ಬೆಳೆಯುತ್ತಾ ಇದ್ದರು.

ಮೊಗ್ಗಿನ ಮನಸ್ಸು ಸಿನಿಮಾ ಬಳಿಕ ಯಶ್ ನಟನೆಯ ಹಲವಾರು ಸಿನಿಮಾಗಳು ತೆರೆಗೆ ಬಂದು ನಟ ಯಶ್ ಅವರು ಸ್ಟಾರ್ ನಟರಾಗಿ ಗುರುತಿಸಿಕೊಳ್ಳುತ್ತ ಸಾಗಿದರು. ರಾಜಾಹುಲಿ, ಗೂಗ್ಲಿ, ಡ್ರಾಮಾ, ಮಿಸ್ಟರ್ & ಮಿಸಸ್ ರಾಮಾಚಾರಿ ಸೇರಿದಂತೆ ಸಾಕಷ್ಟು ಹಿಟ್ ಚಿತ್ರಗಳಲ್ಲಿ ನಟ ಯಶ್ ಅವರು ನಾಯಕರಾಗಿ ನಟಿಸಿ ಜನಪ್ರಿಯತೆ ಪಡೆದರು.

ಮುಂದೆ, ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್ ಪಾರ್ಟ್ 1 ಸಿನಿಮಾ ಮೂಲಕ ಯಶ್ ಪ್ಯಾನ್ ಇಂಡಿಯಾ ನಟರಾಗಿ ಗುರುತಿಸಿಕೊಂಡರು. ಬಳಿಕ ಬಂದ ಇದೇ ಜೋಡಿ ಯಶ್ ಹಾಗೂ ಪ್ರಶಾಂತ್ ನೀಲ್ ಸಿನಿಮಾ ‘ಕೆಜಿಎಫ್ ಪಾರ್ಟ್ 2’ ಮೂಲಕ ಯಶ್ ಜಾಗತಿಕವಾಗಿ ಗುರುತಿಸಿಕೊಂಡ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಬೆಳೆದರು.

ಕೆಜಿಎಫ್ ಬಳಿಕ ನಟ ಯಶ್ ಅವರು ಕನ್ನಡ ಸಿನಿಮಾ ನಟ ಎಂಬ ಗುರುತಿನ ಜೊತೆ ಪ್ಯಾನ್ ಇಂಡಿಯಾ ರಾಕಿಂಗ್ ಸ್ಟಾರ್ ಪಟ್ಟ ಪಡೆದುಕೊಂಡು ಜಗತ್ತಿನ ತುಂಬಾ ಅಭಿಮಾನಿಗಳನ್ನು ಗಳಿಸಿಕೊಂಡರು. ಮುಂದಿನ ಹೆಜ್ಜೆ ಎಂಬಂತೆ, ನಟ ಯಶ್ ಅವರು ಪ್ಯಾನ್ ವರ್ಲ್ಡ್ ಸಿನಿಮಾ ಟಾಕ್ಸಿಕ್ ಹಾಗೂ ರಾಮಾಯಣ ಸಿನಿಮಾಗೆ ನಟ ಹಾಗೂ ನಿರ್ಮಾಪಕರಾಗಿ ಕೆಲಸ ಶುರ ಮಾಡಿಕೊಂಡರು.

ಕಳೆದ 4-5 ವರ್ಷಗಳಿಂದ ನಟ ಯಶ್ ಅವರು ತಮ್ಮ ಬಿಗ್ ಬಜೆಟ್ ಹಾಗೂ ಜಾಗತಿಕ ಮಟ್ಟದ ಸಿನಿಮಾಗಳಾದ ರಾಮಾಯಣ ಹಾಗೂ ಟಾಕ್ಸಿಕ್ ಸಲುವಾಗಿ ಡೆಡಿಕೇಟೆಡ್ ಆಗಿ ಕೆಲಸ ಮಾಡಿದರು. ಸದ್ಯ ಯಶ್ ನಾಯಕತ್ವದ ಟಾಕ್ಸಿಕ್ ಹಾಗೂ ಯಶ್ ವಿಲನ್ ರೋಲ್‌ನಲ್ಲಿ ನಟಿಸಿರುವ ಭಾರಿ ಬಜೆಟ್ ಚಿತ್ರವಾದ ರಾಮಾಯಣ, ಈ ಎರಡೂ ಸಿನಿಮಾಗಳೂ ತೆರೆಗೆ ಬರಲು ಸಜ್ಜಾಗಿ ನಿಂತಿವೆ.

ಯಶ್ ನಾಯಕತ್ವ ಹಾಗೂ ನಿರ್ಮಾಣ ಪಾಲುದಾರಿಕೆಯ ‘ಟಾಕ್ಸಿಕ್’ ಚಿತ್ರದ ಟ್ರೇಲರ ನಿನ್ನೆ ಅಂದರೆ 8 ಆಗಸ್ಟ್ 2026ರಂದು ಬೆಂಗಳೂರಿನಲ್ಲಿ ಅದ್ದೂರಿ ಈವೆಂಟ್ ಮೂಲಕ ಲಾಂಚ್ ಆಗಿದೆ. ಈ ಈವೆಂಟ್‌ಅನ್ನು ನೋಡಿ ಇಡೀ ಜಗತ್ತು ನಿಬ್ಬೆರಗಾಗಿ ಯಶ್ ಅವರನ್ನು ಮೆಚ್ಚಿ ಕೊಂಡಾಡುತ್ತಿದೆ. ಕನ್ನಡ-ಇಂಗ್ಲಿಷ್ ಭಾಷೆಯಲ್ಲಿ ಸಿದ್ಧವಾಗಿರುವ ಟಾಕ್ಸಿಕ್ ಸಿನಿಮಾ ಇದೇ ತಿಂಗಳ ಕೊನೆಯ ವಾರದಲ್ಲಿ, ಅಂದರೆ 26 ಆಗಸ್ಟ್ 2026 ರಂದು ಜಗತ್ತಿನಾದ್ಯಂತ ಭಾರತ ಹಾಗೂ ವಿದೇಶದ ಹಲವು ಭಾಷೆಗಳಿಗೆ ಡಬ್ ಆಗಿ ಬಿಡುಗಡೆ ಆಗಲಿದೆ. ಈಗಾಗಲೇ ಭಾರೀ ನಿರೀಕ್ಷೆ ಸೃಷ್ಟಿ ಮಾಡಿದೆ.

ಇನ್ನು, ನಿರ್ಮಾಪಕರಲ್ಲೂ ಒಬ್ಬರಾಗಿ, ಯಶ್ವ ನಟನೆಯ ‘ರಾಮಾಯಣ’ ಸಿನಿಮಾದ ಟ್ರೇಲರ್ ಕೂಡ ಕಳೆದ ವಾರ ಬಿಡುಗಡೆಯಾಗಿದ್ದು, ಭಾರೀ ಮೆಚ್ಚುಗೆ ಗಳಿಸಿದೆ. ರಾವಣನ ಪಾತ್ರದಲ್ಲಿ ಕಾಣಿಸಿಕೊಂಡಿರುವ ಯಶ್ ಅದರಲ್ಲಿ ಅಕ್ಷರಶಃ ಮಿಂಚಿದ್ದಾರೆ. ಈ ಸಿನಿಮಾ ಕೂಡ ಜಾಗತಿಕ ಮಟ್ಟದಲ್ಲಿ ಬಿಡುಗಡೆ ಆಗುತ್ತಿದ್ದು, ಭಾರೀ ನಿರೀಕ್ಷೆ ಮೂಡಿಸಿದೆ.

ಕನ್ನಡದ ನಟರಾಗಿದ್ದ ಯಶ್ ಅವರು ಇಷ್ಟು ದೊಡ್ಡ ಮಟ್ಟಕ್ಕೆ, ವಿಶ್ವದಾದ್ಯಂತ ಹೆಸರು ಮಾಡಲು, ಹಾಲಿವುಡ್ ರೇಂಜ್ ರೀಚ್ ಆಗಲು, ಪ್ಯಾನ್ ವರ್ಲ್ಡ್ ನಟರಾಗಲು ಕಾರಣದ ಸಂಗತಿಗಳು ಯಾವವು ಗೊತ್ತಾ?

ಅದು ಮತ್ತೇನೂ ಅಲ್ಲ.. ಯಶ್ ಅವರ ಸತತ ಪರಿಶ್ರಮ, ಬಿಗ್ ಡ್ರೀಮ್ ಅಂದರೆ ಅತ್ಯಂತ ದೊಡ್ಡ ಕನಸು ಕಂಡಿದ್ದು ಹಾಗೂ ಅದನ್ನು ನನಸಾಗಿಸಲು ಹಗಲಿರುಳೂ ಶ್ರಮಿಸಿದ್ದೇ ಕಾರಣ. ಅದೃಷ್ಟದ ಬಲವೂ ಸಾಥ್ ನೀಡಿದ್ದರೂ ಕೂಡ, ಯಶ್ ಅವರ ಕೆಲಸದ ಶ್ರದ್ಧೆ, ಕನ್ನಡ ಸಿನಿಮಾವನ್ನು ಪ್ರಪಂಚಕ್ಕೇ ತಲುಪಿಸಬೇಕೆಂಬ ಅದಮ್ಯ ಬಯಕೆ ಹಾಗೂ ಅದಕ್ಕೆ ಬೇಕಾದ ತಂಡ ಕಟ್ಟಿಕೊಂಡು ಮಾಡಿದ ಅವರತ ಪ್ರಯತ್ನವೇ ಇಂಥ ಅಮೋಘ ಸಾಧನೆಗೆ ಕಾರಣ..

ಇಂದು ನಟ ಯಶ್ ಅವರು ‘ಇಡೀ ವಿಶ್ವವೇ ಗುರುತಿಸುವ, ಆರಾಧಿಸುವ, ಪ್ಯಾನ್ ವರ್ಲ್ಡ್ ಪಟ್ಟ ಗಿಟ್ಟಿಸಿಕೊಂಡ ಕನ್ನಡದ ಏಕೈಕ ನಟ. ಅವರ ಮುಂಬರುವ 2 ಸಿನಿಮಾ ನೋಡಲು ಇಡೀ ಜಗತ್ತೇ ಕಾಯುತ್ತಿದೆ ಎಂದರೆ, ಅವರೇನು, ತಲುಪಿದ ಎತ್ತರವೇನು ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ! ಅವರ ಸಾಧನೆಯೇ ಎಲ್ಲವನ್ನೂ ಹೇಳುತ್ತೆ..



Movie News